ಜಮೀರ್ ಅಹ್ಮದ್ ನನ್ನು ಪಾಕಿಸ್ತಾನಕ್ಕೆ ಹೋಗಲು ಹೇಳಿದ ಶಿವಣ್ಣ. ಭಾರತ ಆತನ ತಾತನ ಆಸ್ತಿಯಲ್ಲ ಎಂದ ಮಾಜಿ ಸಚಿವ.

ಜಮೀರ್ ಅಹ್ಮದ್ ನನ್ನು ಪಾಕಿಸ್ತಾನಕ್ಕೆ ಹೋಗಲು ಹೇಳಿದ ಶಿವಣ್ಣ. ಭಾರತ ಆತನ ತಾತನ ಆಸ್ತಿಯಲ್ಲ ಎಂದ ಮಾಜಿ ಸಚಿವ.

September 3, 2018 0 By admin

ಜಮೀರ್ ಅಹಮದ್ ಕಾಂಗ್ರೆಸ್-ಜೆಡಿಎಸ್ ಪಕ್ಷದ ಮೈತ್ರಿಕೂಟದಲ್ಲಿ ಮಂತ್ರಿಯಾದವರು. ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆ ನೀಡಿ ಸಮಾಜ ಒಡೆಯುವಲ್ಲಿ ಮುಂಚೂಣಿಯಲ್ಲಿರುವ ಸಚಿವ. ಇತ್ತೀಚಿನ ಹೇಳಿಕೆಯಲ್ಲಿ ಬಿಜೆಪಿಗೆ ಮತ ನೀಡುವ ಮುಸಲ್ಮಾನರು ನಿಜವಾದ ಮುಸಲ್ಮಾನರೇ ಅಲ್ಲ ಎಂದು ಹೇಳಿ ಯಾರು ಮುಸಲ್ಮಾನರು ಯಾರು ಮುಸಲ್ಮಾನರಲ್ಲ ಎಂದು ಪಕ್ಷಕ್ಕೆ ಮತ ನೀಡುವುದರಲ್ಲಿ ನಿರ್ಧರಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ ಭಾರತ ಸೌಹಾರ್ದತೆಯಿಂದಿರುವ ದೇಶ. ಭಾರತ ಪಾಕಿಸ್ತಾನ ವಿಭಜನೆಯಾಗುವಾಗ ಮುಸಲ್ಮಾನರ‌ ಸಂಖ್ಯೆ ೩ ಕೋಟಿ ಇತ್ತು. ಇವಾಗ ೩೦ ಕೋಟಿ ಇದ್ದಾರೆ. ನಾವು ಸೌಹಾರ್ದತೆ ಇರುವುದರಿಂದ ಇದು ಸಾಧ್ಯವಾಗಿದೆ. ಬ್ರಿಟಿಷ್, ಮೊಘಲರಿಂದಲೂ ನಮ್ಮ ಸಂಸ್ಕೃತಿ ನಾಶವಾಗಲಿಲ್ಲ ಆದರೆ ಇಂದಿನ ಕೆಲವು ಕಿಡಿಗೇಡಿಗಳಿಂದ ಹಿಂದೂಗಳ ಸಂಸ್ಕೃತಿ ನಾಶವಾಗುತ್ತಿದೆ. ಹಿಂದೂ ಮುಸಲ್ಮಾನ ಸೌಹಾರ್ದತೆ ದಕ್ಕೆ ತರುತ್ತಿದೆ. ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.