ರಾಜಕೀಯ ಚತುರ ಪ್ರಶಾಂತ್ ಕಿಶೋರ್ ನಡೆಸಿದ ಸಮೀಕ್ಷೆ ಪ್ರಕಾರ ಯಾರು ಇಂದಿಗೂ ಜನರ ಅಚ್ಚುಮೆಚ್ಚಿನ ನಾಯಕ ಗೊತ್ತೇ? ರಾಹುಲ್ ಗೆ ಸಿಕ್ಕ ಸ್ಥಾನಗಳೆಷ್ಟು?

ರಾಜಕೀಯ ಚತುರ ಪ್ರಶಾಂತ್ ಕಿಶೋರ್ ನಡೆಸಿದ ಸಮೀಕ್ಷೆ ಪ್ರಕಾರ ಯಾರು ಇಂದಿಗೂ ಜನರ ಅಚ್ಚುಮೆಚ್ಚಿನ ನಾಯಕ ಗೊತ್ತೇ? ರಾಹುಲ್ ಗೆ ಸಿಕ್ಕ ಸ್ಥಾನಗಳೆಷ್ಟು?

September 4, 2018 0 By admin

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಅತ್ಯಂತ ಜನಪ್ರಿಯ ರಾಜಕಾರಣಿ ಎಂದು ರಾಜಕೀಯ ತಂತ್ರರೂಪಕ ಪ್ರಶಾಂತ್‌ ಕಿಶೋರ್‌ ನೇತೃತ್ವದ ತಂಡ ನಡೆಸಿದ ಸಮೀಕ್ಷೆ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡ ದೇಶದ 712 ಜಿಲ್ಲೆಗಳ 57 ಲಕ್ಷ ಮಂದಿ ಮತ ನೀಡಿದ್ದು, ಪ್ರಧಾನಿ ಮೋದಿ ಅತಿ ಜನಪ್ರಿಯ ಮತ್ತು ಸಮರ್ಥ ರಾಜಕಾರಣಿ ಎಂದು ಶೇ. 48 ಮಂದಿ ಹೇಳಿದ್ದಾರೆ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಮತ್ತು ದೂರದರ್ಶಿತ್ವ ಹೊಂದಿರುವ ನಾಯಕರಾಗಿ ಮೋದಿ ಉತ್ತಮ ಆಯ್ಕೆ ಎಂದು ಸಮೀಕ್ಷೆಯಲ್ಲಿ ಜನರು ಹೇಳಿದ್ದಾರೆ.

ಪ್ರಶಾಂತ್ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (ಐ-ಪ್ಯಾಕ್) ಸರ್ವೇ ಕೈಗೊಂಡಿದ್ದು, ಪ್ರಧಾನಿ ಮೋದಿ ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಥಾನ ಪಡೆದಿದ್ದಾರೆ. ರಾಹುಲ್ ಗಾಂಧಿ ಪರವಾಗಿ ಶೇ. 11 ಮಂದಿ ಮತ ನೀಡಿದ್ದಾರೆ. ಐ-ಪ್ಯಾಕ್‌ ಆನ್‌ಲೈನ್‌ನಲ್ಲಿ ನ್ಯಾಶನಲ್ ಅಜೆಂಡಾ ಫೋರಂ ಮೂಲಕ ಜುಲೈನಲ್ಲಿ ಸಮೀಕ್ಷೆ ಆರಂಭಿಸಿತ್ತು. ಮುಂದಿನ ವರ್ಷ ಲೋಕಸಭೆ ಚುನಾವಣೆಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಶಾಂತ್ ತಂಡ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದು, ಒಟ್ಟು 923 ಮಂದಿ ನಾಯಕರ ಪಟ್ಟಿಯನ್ನು ಸಮೀಕ್ಷೆಗೆ ಒಳಪಡಿಸಿತ್ತು. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅತಿ ಜನಪ್ರಿಯ ಸಿಎಂ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಹೇಳಿದ್ದು, ಶೇ. 9.3 ಮಂದಿ ಅವರ ಪರ ಮತ ಚಲಾಯಿಸಿದ್ದಾರೆ.