NDA ಬಿಡುತ್ತಾರೆ ಅನ್ನುವ ಸುದ್ದಿ ನಡುವೆ ಮೋದಿ ಎಲ್ಲರಿಗಿಂತ ಶ್ರೇಷ್ಠ ಎಂದ ರಾಮ್ ವಿಲಾಸ್ ಪಾಸ್ವಾನ್.

NDA ಬಿಡುತ್ತಾರೆ ಅನ್ನುವ ಸುದ್ದಿ ನಡುವೆ ಮೋದಿ ಎಲ್ಲರಿಗಿಂತ ಶ್ರೇಷ್ಠ ಎಂದ ರಾಮ್ ವಿಲಾಸ್ ಪಾಸ್ವಾನ್.

August 13, 2018 0 By admin

ಬಿಜೆಪಿ ನೇತೃತ್ವದNDA ಸರಕಾರ ಕೇಂದ್ರದಲ್ಲಿ ಬಂದು ನಾಲ್ಕು ವರ್ಷಗಳು ಆಗಿವೆ. ಈ ನಾಲ್ಕು ವರ್ಷಗಳಲ್ಲಿ ಅನೇಕ ಮಹತ್ತರವಾದ ಹೆಜ್ಜೆಗಳನ್ನು ಇಟ್ಟಿದ್ದಾರೆ. ಮೋದಿ ಇಂದು ತಂದ ಕಠಿಣ ಕ್ರಮಗಳಿಂದ ಅನೇಕ ಮೋಸಗಾರರು ದೇಶ ಬಿಡಲು ಚಿಂತನೆ ನಡೆಸುತ್ತಿದ್ದಾರೆ ಆದರೆ ಸಾಧ್ಯವಾಗುತ್ತಿಲ್ಲ. ಭಾರತ ಇಂದು ಒಂದು ದೊಡ್ಡ ಶಕ್ತಿಶಾಲಿ ದೇಶವಾಗಿ ಮಾರ್ಪಾಡಾಗಿದೆ. ಮುಂದಿನ ವರ್ಷ ಮತ್ತೊಮ್ಮೆ ತಮ್ಮ ಅಭಿವೃದ್ಧಿಯ ಬಗ್ಗೆ ಜನರ ಎದುರು ಹೇಳಿ ಚುನಾವಣೆ ಗೆಲ್ಲಬೇಕಿದೆ. ವಿರೋಧ ಪಕ್ಷಗಳು ಮಹಾಘಟಬಂದನ್ ಆಗಿ ಮಾರ್ಪಾಡಾಗಿದೆ.

ಈ ಮಹಾಘಟಬಂದನ್ ಇಂದ ತಮಗೆ ಲಾಭವಾಗುತ್ತದೆ ಎಂದು ತಿಳಿದುಕೊಂಡಿರುವ ವಿರೋಧ ಪಕ್ಷಗಳಿಗೆ ಜನರು ಎಲ್ಲಾ ತಿಳಿದುಕೊಂಡಿದ್ದಾರೆ. ನಮಗಾಗಿ ಕೆಲಸ ಮಾಡುತ್ತಿಲ್ಲ ತಮ್ಮ ಸ್ವಾರ್ಥಕ್ಕಾಗಿ ಒಂದಾಗಿದ್ದಾರೆ ಎಂದು ತಿಳಿದೆ ಹದಿನೈದು ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ ನೀಡಿದ್ದಾರೆ. NDA ಸಹಭಾಗಿತ್ವದ ಲೋಕ್ ಜನ ಶಕ್ತಿ ಪಕ್ಷ ಮೋದಿಗೆ ಬೆಂಬಲ ಬಿಡುತ್ತಾರೆ ಎಂದು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಮೋದಿ ಬಗ್ಗೆ ಇತ್ತೀಚಿಗೆ ಪಾಸ್ವಾನ್ ಹೇಳಿದ ಹೇಳಿಕೆ ಈ ಎಲ್ಲಾ ಗುಸುಗುಸುಗಳಿಗೆ ತೆರೆ ಎಳೆದಿದ್ದಾರೆ.

ಕೇಂದ್ರೀಯ ಮಂತ್ರಿ ಹಾಗು ಲೋಕ ಜನ ಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್ ಮೋದಿ ಒಬ್ಬರು ಬಹುದೊಡ್ಡ ಅಂಬೇಡ್ಕರ್ ವಾದಿ ಎಂದು ಹೇಳಿದ್ದಾರೆ. ಇತ್ತೀಚೆಗೆ ತಂದ ಎಸ್ಸಿ ಎಸ್ಟಿ ಬಿಲ್ ಸಾಭಿತು ಪಡಿಸಿದೆ ಮೋದಿ ಒಬ್ಬರು ಬಹುದೊಡ್ಡ ಅಂಬೇಡ್ಕರ್ ವಾದಿ ಎಂಬುದು. ರವಿವಾರ ಅವರು ಎಲ್ ಜಿ ಪಿ ಹಾಗೂ ದಲಿತ ಸಂಘಟನೆಗಳು ನಡೆಸಿದ ಸಮಾವೇಶದಲ್ಲಿ ಮಾತಾಡುತ್ತ ದಲಿತರು, ಆದಿವಾಸಿಗಳು, ಬುಡಕಟ್ಟು ಜನಾಂಗದವರನ್ನು ಉದ್ದೇಶಿಸಿ ಮಾತಾಡುವಾಗ ಹೇಳಿಕೆ ನೀಡಿದರು.

ಬಿಜೆಪಿ ದಲಿತ ವಿರೋಧಿಯಲ್ಲ, ಕಾಂಗ್ರೆಸ್ ದಲಿತ ವಿರೋಧಿ ಪಕ್ಷ. ದಲಿತರನ್ನು ಮೇಲೆತ್ತಲು ಸರ್ವ ಪ್ರಯತ್ನ ಮಾಡುತ್ತಿದೆ. ಅಲ್ಪಸಂಖ್ಯಾತರನ್ನು‌‌ ನಾವು ಎಂದೂ ದ್ವೇಷಿಸಿಲ್ಲ. ಮುಂದೆಯೂ ಅವರನ್ನು ವಿರೋಧಿಸುವುದಿಲ್ಲ ಎಂದು ಹೇಳಿದರು. ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಅನ್ನು ಎಲ್ಲಾ ರೀತಿಯಲ್ಲೂ ತರಾಟೆಗೆ ತೆಗೆದುಕೊಂಡರು.