ಹುತಾತ್ಮ ಯೋಧನ ಈ ಅಂತಿಮ ಯಾತ್ರೆಯ ವೀಡಿಯೋ ಪ್ರತಿಯೊಬ್ಬ ಭಾರತೀಯರ ಕಣ್ಣಲ್ಲಿ ನೀರು ಬರುವುದು ಖಚಿತ.

ಹುತಾತ್ಮ ಯೋಧನ ಈ ಅಂತಿಮ ಯಾತ್ರೆಯ ವೀಡಿಯೋ ಪ್ರತಿಯೊಬ್ಬ ಭಾರತೀಯರ ಕಣ್ಣಲ್ಲಿ ನೀರು ಬರುವುದು ಖಚಿತ.

August 12, 2018 0 By admin

ಗುರುವಾರದಂದು ಮೇಜರ್ ಕೌಸ್ತುಭ್ ಪ್ರಕಾಶ್ ರಾಣೆ ಕಾಶ್ಮೀರದ ಗಡಿಯಾದ ಬಂಡೀಪುರ್ ಜಿಲ್ಲೆಯಲ್ಲಿ ಉಗ್ರರ ಹಾಗೂ ಸೇನೆ ನಡುವೆ ನಡೆದ ಕಾಳಗದಲ್ಲಿ ಹುತಾತ್ಮರಾದರು. ದೇಶದೊಳಗೆ ಪ್ರವೇಶಿಸಲು ಪ್ರಯತ್ನಸಿದ ಇಬ್ಬರು ಉಗ್ರರನ್ನು ಹೊಡೆದುರುಳಿಸಿ ತಾನೂ ಹುತಾತ್ಮರಾದರು.

ಪಾರ್ಥಿವ ಶರೀರ ಮುಂಬಯಿ ತಲುಪಿದಾಗ…

ಕಾಶ್ಮೀರದಲ್ಲಿ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಪ್ರಕಾಶ್ ರಾಣೆ ಮೃತದೇಹದ ಮೇಲೆ ತಿರಂಗಾ ಹೊದಿಸಿ ಬರಬೇಕಾದರೆ ಅಲ್ಲಿ ನಡೆದಂತಹ ದೃಶ್ಯ ನೋಡಿದರೆ ಪ್ರತಿಯೊಬ್ಬರ ಕಣ್ಣಲ್ಲಿ ನೀರು ಬರುವುದು ಖಚಿತ. ಮೃತದೇಹದ ತರುವ ಸೇನೆಯ ಟ್ರಕ್ ಹೂವಿನಿಂದ ಸಿಂಗರಿಸಿತ್ತು. ಪಾರ್ಥಿವ ಶರೀರವನ್ನು ತರುವ ದಾರಿಯಲ್ಲಿ ಹೂವುಗಳನ್ನು ಹರಡಿ ಅಂತಿಮ ಯಾತ್ರೆ ನಡೆಸಿದರು. ನಿಜವಾಗಿಯೂ ಈ ದೃಶ್ಯ ನೋಡಿ ಭಾರತೀಯನ ಹೃದಯ ತುಂಬಿ ಬರುವುದು ಖಂಡಿತ.

ಭಾರತ್ ಮಾತಾ ಕೀ ಜೈ ಘೋಷಣೆಯಿಂದ ತುಂಬಿ ಹೋಗಿತ್ತು ಮುಂಬಯಿ.

ದಾರಿಯಲ್ಲಿ ನಿಂತಿದ್ದ ಪ್ರತಿಯೊಬ್ಬರೂ ಭಾರತ್ ಮಾತಾ ಕೀ ಜೈ ಘೋಷಣೆ ಕೂಗುತ್ತಿದ್ದರು. ಅದರ ಜೊತೆಗೆ ಮೇಜರ್ ಪ್ರಕಾಶ್ ರಾಣೆ ಅಮರ್ ರಹೇ ಎಂಬ ಘೋಷಣೆ ಕೂಡಾ ಕೂಗುತ್ತಿದ್ದರು.

ಮೇಜರ್ ಗೆ ರಕ್ಷಾ ಬಂಧನ ಕಟ್ಟಿದ ಸಹೋದರಿಯರು.

ಮೃತದೇಹದ ತಲುಪಿದಾಗ ಅವರ ಸಹೋದರಿಯರು ರಕ್ಷಾ ಬಂಧನ ಕಟ್ಟಿ ಅಂತಿಮ ನಮನ ಸಲ್ಲಿಸಿದರು. ಅವರ ಪತ್ನಿ ಭಾವುಕರಾದಾಗ ಅಲ್ಲಿ ಸೇರಿದ್ದ ಜನರು ಅವರನ್ನು ಸಂತೈಸಿದರು.

ನಮ್ಮ ಕಡೆಯಿಂದ ಕೂಡಾ ಮೇಜರ್ ಗೆ ಶ್ರದ್ಧಾಂಜಲಿ. ಇವರ ಬಲಿಯ ಪ್ರತಿಕಾರ ಭಾರತೀಯ ಸೇನೆ ಶೀಘ್ರದಲ್ಲೇ ಪಡೆಯಲಿ ಎಂಬುದು ಭರವಸೆಯಿಡೋಣ.