ಹಾಳಾದ ಮಹಾಘಟಬಂದನ್. ದೆಹಲಿ ಉಪ ಮುಖ್ಯಮಂತ್ರಿ ಹೇಳಿಕೆ ರಾಹುಲ್ ಕನಸಿಗೆ ತಣ್ಣೀರೆರಚುವುದು ಖಚಿತ.

ಹಾಳಾದ ಮಹಾಘಟಬಂದನ್. ದೆಹಲಿ ಉಪ ಮುಖ್ಯಮಂತ್ರಿ ಹೇಳಿಕೆ ರಾಹುಲ್ ಕನಸಿಗೆ ತಣ್ಣೀರೆರಚುವುದು ಖಚಿತ.

August 9, 2018 0 By admin

ಮಹಾಘಟಬಂದನ್ ಬಗ್ಗೆ ಬಿಹಾರ, ಉತ್ತರ ಪ್ರದೇಶ ಮಾತ್ರವಲ್ಲದೆ ದೆಹಲಿಯಲ್ಲೂ ಚರ್ಚೆ ಶುರುವಾಗಿದೆ. ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿಕೆ ವಿಪಕ್ಷಗಳ ಮಹಾಘಟಬಂದನ್ ಗೆ ಅದರಲ್ಲೂ ರಾಹುಲ್ ಆಸೆಗೆ ಹೊಡೆತ ಬೀಳುವುದು ಖಚಿತ. ವಿಷಯವೇನು? ದೆಹಲಿಯ ಜಂತರ್ ಮಂತರ್ ಅಲ್ಲಿ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ಮಹಾಘಟಬಂದನ್ ಮುಖ್ಯಸ್ಥ ತೇಜಸ್ವಿ ಯಾದವ್ ಮುಜಫರ್ ಶೆಲ್ಟರ್ ಹೋಮ್ ನ ಭ್ರಷ್ಟಾಚಾರ ವಿಚಾರವಾಗಿ ದರಣಿ ನಡೆಸುತ್ತಿದ್ದರು. ಈ ದರಣಿಯಲ್ಲಿ ರಾಹುಲ್ ಗಾಂಧಿ ಹಾಗೂ ಅರವಿಂದ ಕೇಜ್ರೀವಾಲ್ ಸಹಿತ ವಿಪಕ್ಷಗಳ ಹಲವಾರು ನಾಯಕರು ಸೇರಿದ್ದರು. ಇದೇ ಸರಿಯಾದ ಸಮಯವೆಂದು ಆಮ್ ಆದ್ಮಿ ಪಕ್ಷ ಮಹಾಘಟಬಂದನ್ ವಿರುದ್ದ ಹೇಳಿಕೆ ನೀಡಲು ಶುರು ಮಾಡಿದರು. ಏನು ಅದು ಹೇಳಿಕೆ? ಇಲ್ಲಿದೆ ಓದಿ.

ಮಹಾಘಟಬಂದನ್ ಬಗ್ಗೆ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಮನೀಷ್ ಸಿಸೋಡಿಯಾ

ಮಹಾಘಟಬಂದನ್ ಕೇವಲ ದೂರದರ್ಶನದಲ್ಲಿ ಆಗುವುದನ್ನು ನೋಡಿದ್ದೇವೆ, ನಾವು ಮಹಾಘಟಬಂದನ್ ಅಲ್ಲಿ ಇಲ್ಲ, ಮಹಾಘಟಬಂದನ್ ಕೇವಲ ದೊಡ್ಡ ದೊಡ್ಡ ವ್ಯಕ್ತಿಗಳಿಗೆ. ನಾವೆಲ್ಲ ಅದರಲ್ಲಿ ಹೇಗೆ ಸೇರುತ್ತೇವೆ.

ಮನೀಷ್ ಸಿಸೋಡಿಯಾ ರಾಹುಲ್ ಕನಸಿಗೆ ತಣ್ಣೀರೆರಚಿದರು, ಬಹಳ ತಾರ್ಕಿಕವಾಗಿ ಹೇಳಿಕೆ ನೀಡಿದ ಮನೀಷ್ ಸಿಸೋಡಿಯಾ “ಮಹಾಘಟಬಂದನ್ ಕೇವಲ ರಾಜ್ಯಗಳಲ್ಲಿ ನೋಡಿದ್ದೇವೆ ಹಾಗೂ ಇದು ರಾಜ್ಯಗಳಲ್ಲಿ ನಡೆಯುತ್ತದೆ, ನಮಗೆ ಇದರಲ್ಲಿ ಏನು ಕೆಲಸ” ಎಂದು ಹೇಳಿದ್ದಾರೆ.

ಮನೀಷ್ ಸಿಸೋಡಿಯಾ ಮಾದ್ಯಮಗಳ ಬಳಿ ಈ ಮಾಯಾವತಿ-ಅಖಿಲೇಶ್, ಕಾಂಗ್ರೆಸ್ ಆರ್ಜೆಡಿ ಮಹಾಘಟಬಂದನ್ ಒಳ್ಳೆಯ ಬೆಳವಣಿಗೆ ಆದರೆ ಇದು ಕೇವಲ ಟಿವಿಗೆ ಮಾತ್ರ ಸೀಮಿತವಾಗಿದೆ. ಮನೀಷ್ ಸಿಸೋಡಿಯಾ ಮಹಾಘಟಬಂದನ್ ಅಸ್ತಿತ್ವದ ಕುರಿತೆ ಪ್ರಶ್ನಿಸಿದ್ದಾರೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ, ಈ ಮಹಾಘಟಬಂದನ್ ಬಗ್ಗೆ ಭವಿಷ್ಯದಲ್ಲೇ ತಿಳಿಯಲಿದೆ.