ಮೋದಿ ಸರಕಾರ ಏನು ಮಾಡುತ್ತಿದೆ ಅಂತ ಕೇಳುವವರು ಈ ಸಾಧನೆ ನೋಡಿದ ಮೇಲೆ ಖಂಡಿತವಾಗಿಯೂ ಬಿಜೆಪಿಗೆ ವೋಟು ಹಾಕುತ್ತಾರೆ.

ಮೋದಿ ಸರಕಾರ ಏನು ಮಾಡುತ್ತಿದೆ ಅಂತ ಕೇಳುವವರು ಈ ಸಾಧನೆ ನೋಡಿದ ಮೇಲೆ ಖಂಡಿತವಾಗಿಯೂ ಬಿಜೆಪಿಗೆ ವೋಟು ಹಾಕುತ್ತಾರೆ.

August 8, 2018 0 By admin

ಯಾವಾಗ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಸರಕಾರ ಪ್ರಾರಂಭಿಸಿತೋ ಅಂದಿನಿಂದ ಅನೇಕ ಸಾಧನೆ ಮಾಡುತ್ತಾ ಬರುತ್ತಿದೆ. ಭಾರತವನ್ನು ಜಗತ್ತಿನಲ್ಲಿ ಉನ್ನತ ಸ್ಥಾನಕ್ಕೇರಿಸುವ ಮೋದಿಯ ಪ್ರಯತ್ನ ಸಾಕಾರವಾಗುತ್ತಿದೆ. ಅಭಿವೃದ್ಧಿಯನ್ನು ನಂಬಿ ಭಾರತೀಯರು ಮೋದಿಗೆ ನೀಡಿದ ಮತ ಸದುಪಯೋಗಗೊಳ್ಳುತ್ತಿದೆ. ಪ್ರತಿ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದೆ, ಇತ್ತೀಚಿಗೆ ಒಂದು ರಿಪೋರ್ಟ್ ಹೊರಗೆ ಬಂದಿತು ಅದನ್ನು ಕೇಳಿದರೆ ನಿಮಗೂ ಮೋದಿ ಬಗ್ಗೆ ಹೆಮ್ಮೆ ಎನಿಸುತ್ತದೆ. ಹಾಗು ವಿರೋಧಿಗಳಿಗೆ ಮೋದಿಯನ್ನು ವಿರೋಧಿಸಲು ಯಾವ ಮಾರ್ಗಗಳೂ ಇರುವುದಿಲ್ಲ.

ಮೋದಿಯವರ ಕನಸಾಗಿರುವ ಪ್ರತಿ ಹಳ್ಳಿಗೂ, ಪ್ರತಿ ಮನೆಗೂ ವಿದ್ಯುತ್ ಕಲ್ಪಿಸುವ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. ದೀನ ದಯಾಳ್ ಉಪಾಧ್ಯಾಯ ಜ್ಯೋತಿ ಯೋಜನೆ ಮುಖಾಂತರ ಸುಮಾರು 18,452 ಹಳ್ಳಿಗಳಿಗೆ ವಿದ್ಯುತ್ ಕಲ್ಪಿಸುವ ಕಾರ್ಯದಲ್ಲಿ ಇಂದು ಕೇವಲ ಎರಡು ಪ್ರತಿಶತ ಹಳ್ಳಿಗಳು ಮಾತ್ರ ವಿದ್ಯುತ್ ಪಡೆಯುವಲ್ಲಿ ದೂರವಿದೆ. ಉಳಿದೆ 98% ಹಳ್ಳಿಗಳು ನಾಲ್ಕು ವರ್ಷದಲ್ಲಿ ವಿದ್ಯುತ್ ಸಂಪರ್ಕ ಪಡೆದಿದೆ. ಇದರಲ್ಲಿ ವಿಶೇಷ ಏನಿದೆ ಅಂತ ನೀವು ಕೇಳಬಹುದು ಆದರೆ ಇಲ್ಲಿ ವಿಶೇಷ ಏನೆಂದರೆ ಈ ಹಳ್ಳಿಗಳು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 7೦ ವರ್ಷ ಕಳೆದ ನಂತರ ವಿದ್ಯುತ್ ಸಂಪರ್ಕ ದೊರೆತಿವೆ. ಹಿಂದಿನ ಸರಕಾರಗಳು ಸ್ವಾರ್ಥಕ್ಕಾಗಿ ಆಡಳಿತ ನಡೆಸುತ್ತಿದ್ದವು ಹೊರತು ತಮ್ಮ ರಾಜ್ಯ, ಜಿಲ್ಲೆ, ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕೊಡಲು ಆಸಕ್ತಿ ತೋರಿಸಿರಲಿಲ್ಲ.

ಎರಡು ಪ್ರತಿಷತ ಅಂದರೆ 433 ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಗೊಳ್ಳುತ್ತಿದೆ. ವಿದ್ಯುತ್ ವಂಚಿತ ದೊಡ್ಡ ರಾಜ್ಯ ಅರುಣಾಚಲ ಪ್ರದೇಶ 296 ಹಳ್ಳಿಗಳು, ಜಮ್ಮು-ಕಾಶ್ಮೀರ 66, ಛತ್ತೀಸ್ಗಢ 44, ಉತ್ತರಾಖಂಡ 14, ಒಡಿಶಾ 6, ಮಿಜೋರಾಮ್ 1 ಹಳ್ಳಿಯಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣಗೊಳ್ಳಲಿದೆ ಇನ್ನು ಒಂದು ವರ್ಷದಲ್ಲಿ.