ಪಾಕಿಸ್ತಾನ ಗಡಿಯಲ್ಲಿ ರಕ್ತ ಹರಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದರೆ, ಸಿದ್ದು  ಇದೊಂದು “ಸಕಾರಾತ್ಮಕ ಉದ್ದೇಶ” ಎಂದು ಪತ್ರ ಬರೆಯುತ್ತಿದ್ದಾನೆ.

ಪಾಕಿಸ್ತಾನ ಗಡಿಯಲ್ಲಿ ರಕ್ತ ಹರಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದರೆ, ಸಿದ್ದು ಇದೊಂದು “ಸಕಾರಾತ್ಮಕ ಉದ್ದೇಶ” ಎಂದು ಪತ್ರ ಬರೆಯುತ್ತಿದ್ದಾನೆ.

September 10, 2018 0 By admin

ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಅವರು ಭಾರತದಲ್ಲಿ “ಗಡಿಗಳಲ್ಲಿ ರಕ್ತ ಹರಿಯುವ ಪ್ರತೀಕಾರಕ್ಕೆ ನಾವು ಪ್ರತೀಕಾರ ತೀರಿಸಲಿದ್ದೇವೆ” ಎಂದು ದ್ವೇಷ ಕಾರುತ್ತಿರುವಾಗ ಕಾಂಗ್ರೆಸ್ ನ ನಾಯಕ ನವಜೋತ್ ಸಿಂಗ್ ಸಿದ್ದು ಪಾಕಿಸ್ತಾನ ಸಕಾರಾತ್ಮಕ ಉದ್ದೇಶ ಹೊಂದಿದೆ ಅದಕ್ಕಾಗಿ ವೀಸಾ ಕಾರಿಡಾರ್ ತೆರೆಯಬೇಕು ಎಂದು ಸುಷ್ಮಾ ಸ್ವರಾಜ್ ಗೆ ಪತ್ರ ಬರೆದಿದ್ದಾರೆ.

ಭಾರತವು ಪ್ರಸ್ತಾಪವನ್ನು ಸ್ವೀಕರಿಸಿದಲ್ಲಿ ಪಾಕಿಸ್ತಾನವು ಕಾರಿಡಾರ್ಗೆ ಅವಕಾಶ ನೀಡಿಲಿದೆ ಎಂದು ಬರೆದಿದ್ದಾರೆ. ವಿಶೇಷವಾಗಿ ಸಿಖ್ ಸಮುದಾಯದ ಜನರು ವೀಸಾ ಸಮಸ್ಯೆಗಳಿಲ್ಲದೆ ಗುರುದ್ವಾರಕ್ಕೆ ಭೇಟಿ ನೀಡಬಹುದು ಎಂದು ಸಿಧು ಹೇಳಿದರು.

ಹೊಸದಾಗಿ ಚುನಾಯಿತರಾಗಿದ್ದ ಪಾಕಿಸ್ತಾನದ ಇಮ್ರಾನ್ ಖಾನ್ ಅಧಿಕಾರ ಸ್ವೀಕಾರ ಸಮಾರಂಭದಲ್ಲೂ ಭಾಗವಹಿಸಿದ್ದರು. ಅಲ್ಲಿ ಸೇನಾ ಮುಖ್ಯಸ್ಥರಿಗೆ ಅಪ್ಪುಗೆ ನೀಡಿ ಭಾರತವಾಸಿ ಗಳ ಕೋಪಕ್ಕೆ ಗುರಿಯಾಗಿದ್ದರು.ಜಮ್ಮು ಕಾಶ್ಮೀರದ ಜನರ ಹಕ್ಕುಗಳ ಹೋರಾಟದಲ್ಲಿ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದ ಪಾಕಿಸ್ತಾನಕ್ಕೆ ಸಕಾರಾತ್ಮಕ ಉದ್ದೇಶ ಹೊಂದಿದೆ ಎಂದು ಹೇಳುತ್ತಿರುವ ಸಿದ್ದು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟ ಪಡಿಸಿದ ಮೇಲು ಈ ತರಹದ ಮಾತುಗಳು ಕಾಂಗ್ರೆಸ್ ನ ದೇಶಭಕ್ತಿ ಮೇಲೆ ಸಂಶಯ ಮೂಡಿಸುತ್ತಿದೆ.