ಇವರಾಗುತ್ತಿದ್ದಾರೆ ಮುಂದಿನ ರಾಜ್ಯಸಭೆಯ ಉಪಸಭಾಪತಿ. ವಿಪಕ್ಷಗಳಿಗೆ ತೊಂದರೆಯಾಗಲಿದೆ ಇನ್ನಷ್ಟು.

ಇವರಾಗುತ್ತಿದ್ದಾರೆ ಮುಂದಿನ ರಾಜ್ಯಸಭೆಯ ಉಪಸಭಾಪತಿ. ವಿಪಕ್ಷಗಳಿಗೆ ತೊಂದರೆಯಾಗಲಿದೆ ಇನ್ನಷ್ಟು.

August 8, 2018 0 By admin

ದೇಶದಲ್ಲಿ ಬಹಳಷ್ಟು ರಾಜ್ಯಗಳ ಸೋಲಿನ ಬಳಿಕವೂ ರಾಹುಲ್ ಗಾಂಧಿ ಕಷ್ಟ ಕಡಿಮೆಯಾಗುವ ಲಕ್ಷಣವೇ ಕಾಣುತ್ತಿಲ್ಲ. ಚುನಾವಣೆ ಗೆಲ್ಲಲು ಬಹಳಷ್ಟು ಪರಿಶ್ರಮ ಪಡುತ್ತಿದ್ದಾರೆ ಆದರೆ ಚುನಾವಣಾ ಚಾಣಕ್ಯನ ರಣತಂತ್ರದೆದುರು ಅದೆಲ್ಲವೂ ನಿಷ್ಕ್ರಿಯವಾಗುತ್ತಿದೆ. ಆಗಸ್ಟ್ ೯ರಂದು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಎಲ್ಲಾ ಸಿದ್ದತೆ ನಡೆಯುತ್ತಿದೆ. ಆಗಸ್ಟ್ ೬ರಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಇದನ್ನು ಘೋಷಿಸಿದರು.

ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯ NDA ಕಡೆಯಿಂದ ಜೆಡಿಯು ಸಂಸದ ಹಾಗೂ ಮಾಜಿ ಪತ್ರಕಾರರಾದ ಹರಿವಂಶ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ ಕಾಂಗ್ರೆಸ್ ಡಿ ಎಮ್ ಕೆ ಯ ಸಂಸದ ತಿರುಚಿ ಶಿವ ಅಥವಾ NCP ಯ ವಂದನಾ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಿದ್ದಾರೆ. ಕಾಂಗ್ರೆಸ್ ಈ ಚುನಾವಣೆ ಜಯ ಸಾಧಿಸಲು ತಂತ್ರ ನಡೆಸಿದರೆ ಅಮಿತ್ ಷಾ ಪ್ರತಿತಂತ್ರ ವಿಪಕ್ಷಗಳ ತಂತ್ರಕ್ಕೆ ತಣ್ಣೀರೆರಚಬಹುದು.

NDA ಸಹಯೋಗಿ ದಳವಾದ ಅಕಾಲಿ ದಳ ಕಡೆಯಿಂದ ಈ ಘೋಷಣೆಗೆ ಅಪಸ್ವರ ಕೇಳಿ ಬರುತ್ತಿದೆ. ಕಾರಣ ತಮ್ಮ ಪಕ್ಷದ ನರೇಶ್ ಗುಜರಾಲ್ ಅವರನ್ನು ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಮಾಡಬೇಕೆಂದು ಚರ್ಚೆ ನಡೆಸುತ್ತಿದ್ದರು. ಇಂದಿನ ಜೆಡಿಯು ಅಭ್ಯರ್ಥಿಯ ಹೆಸರು ಘೋಷಣೆ ಮಾಡಿದ್ದಕ್ಕೆ ಅಸಂತುಷ್ಟಗೊಂಡಿದ್ದಾರೆ. ಇದರಿಂದ ವಿಪಕ್ಷಗಳು ಬಾರಿ ಖುಷಿಯಲ್ಲಿವೆ. ಅಂತದರಲ್ಲಿ ಬಿಜೆಪಿ ಹೇಗೆ ಗೆಲ್ಲುತ್ತದೆ? ಇಲ್ಲಿದೆ ನೋಡಿ ಸಂಖ್ಯಾ ಬಲಾಬಲ.

ಅಮಿತ್ ಷಾ ಮಾಸ್ಟರ್ ಪ್ಲಾನ್ ಈಗಾಗಲೇ ತಯಾರಾದಂತಿದೆ. ಉಪಸಭಾಪತಿ ಸ್ಥಾನ ಗೆಲ್ಲಲು ಬೇಕಾಗಿರುವುದು ೧೨೩ ಸ್ಥಾನಗಳು, ಬಿಜೆಪಿ ಬಳಿ ೧೧೦ ಸ್ಥಾನಗಳಿವೆ, BJD, ತಮಿಳುನಾಡಿನ ಆಡಳಿತ ಸರಕಾರ AIDMK ಹಾಗೂ ತೆಲಂಗಾಣದ TRS ಹಾಗೂ YRC ಬಿಜೆಪಿಗೆ ಬೆಂಬಲ ನೀಡಬಹುದು ಎಂದು ಮೂಲಗಳ ವರದಿಯಾಗಿದೆ. ಈ ಪಕ್ಷಗಳ ಸಹಾಯದಿಂದ ಬಿಜೆಪಿ ಬಂಪರ್ ಜಯ ಸಾಧಿಸಲಿದೆ ಎಂದು ಹೇಳಲಾಗುತ್ತಿದೆ.