ಇಮ್ರಾನ್ ಖಾನ್ ಗೆ ಫೋನ್ ಮಾಡಿದ ನರೇಂದ್ರ ಮೋದಿ. ಪೋನಿನಲ್ಲಿ ಹೇಳಿದ್ದೇನು?

ಇಮ್ರಾನ್ ಖಾನ್ ಗೆ ಫೋನ್ ಮಾಡಿದ ನರೇಂದ್ರ ಮೋದಿ. ಪೋನಿನಲ್ಲಿ ಹೇಳಿದ್ದೇನು?

July 31, 2018 0 By admin

ಪಾಕಿಸ್ತಾನದೊಂದಿಗಿನ ಭಾರತದ ಸಂಭಧ ವೃದ್ದಿಯಾಗಬೇಕೆಂದು ಪ್ರಧಾನಿ ಮೋದಿಯವರ ಬಯಕೆ. ಕಾರಣಾಂತರಗಳಿಂದ ಮಾತುಕತೆಗೆ ಹಿನ್ನಡೆಯಾಗುತ್ತಲೆ ಇದೆ. ಇದಕ್ಕೆ ಕಾರಣ ಪಾಕಿಸ್ತಾನದ ಮೊಂಡುತನ. ಕಳೆದ ಎರಡು ವಾರಗಳ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಪಕ್ಷ ಆಡಳಿತ ವಹಿಸಿಕೊಂಡಿತು. ಚುನಾವಣೆಗೂ ಮುನ್ನ ಎಲ್ಲಾ ಪಕ್ಷಗಳು ಮೋದಿಯವರ ಹೆಸರು ಹೇಳಿಕೊಂಡೆ ಪ್ರಚಾರ ಮಾಡಿದ್ದವು ಇದು ಜಗಜ್ಜಾಹಿರವಾಗಿದೆ.

ಚುನಾವಣೆಯಲ್ಲಿ ಇಮ್ರಾನ್ ಖಾನ್ ಪಕ್ಷದ ಗೆಲುವಿನ ನಂತರ ನೂತನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸ್ವತಃ ಪೋನ್ ಕರೆ ಮೂಲಕ ಶುಭಾಶಯ ತಿಳಿಸಿ ಭಾರತ ಹಾಗೂ ಪಾಕಿಸ್ತಾನದ ಹೊಸ ಬಾಂದವ್ಯ ಮೂಡಲಿ ಎಂದು ಆಶಿಸಿದ್ದಾರೆ.