ಅಕ್ರಮ ಕಸಾಯಿಖಾನೆ ತಡೆಯಲು ಹೊರಟ ಮಾಧ್ಯಮ ವರದಿಗಾರನ ಮೇಲೆ ಇಸ್ಲಾಮಿಕ್ ಉಗ್ರರ ದಾಳಿ

ಅಕ್ರಮ ಕಸಾಯಿಖಾನೆ ತಡೆಯಲು ಹೊರಟ ಮಾಧ್ಯಮ ವರದಿಗಾರನ ಮೇಲೆ ಇಸ್ಲಾಮಿಕ್ ಉಗ್ರರ ದಾಳಿ

August 10, 2018 0 By admin

ಇಂಡಿಯಾ ಟುಡೇ ಖಾಸಗಿ ಚಾನಲ್ ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ ಆ ಚಾನಲ್ ನ ವರದಿಗಾರರ ಮೇಲೆ ಇಸ್ಲಾಮಿಕ್ ಉಗ್ರರು ದಾಳಿ ನಡೆಸಿದ್ದಾರೆ. ಕಾರಣ ಅಕ್ರಮ ಗೋಸಾಗಾಣಿಕೆ ಹಾಗೂ ಅಕ್ರಮ ಕಸಾಯಿಖಾನೆಯ ವಿರುದ್ದ ಸುದ್ದಿ ಸಂಗ್ರಹಿಸಿದ್ದಕ್ಕಾಗಿ. ಕರ್ನಾಟಕದ ರಾಮನಗರ ಜಿಲ್ಲೆಯ ಕೋಡಿಪಾಲ್ಯದಲ್ಲಿ ದಿನನಿತ್ಯ ಸುಮಾರು ೨೦೦ಕ್ಕೂ ಹೆಚ್ಚಿನ ಗೋವುಗಳ ಹತ್ಯೆ ಮಾಡಲಾಗುತ್ತದೆ.

ಹಲ್ಲೆಗೊಳಗಾದ ವರದಿಗಾರರ ಪ್ರಕಾರ ಪ್ರಾಣಿದಯಾ ಅಧಿಕಾರಿಗಳು ಅವರ ಜೊತೆ ಬಂದಿದ್ದರು ಹಾಗೂ ಪೋಲಿಸರು ಬರಲು ಮೊದಲು ನಿರಾಕರಿಸಿದರು ನಂತರ ಶಸ್ತ್ರಾಸ್ತ್ರವಿಲ್ಲದೇ ಅಧಿಕಾರಿಗಳ ಜೊತೆ ಬರಲು ಒಪ್ಪಿದರು ಎಂದು ತಿಳಿಸಿದ್ದಾರೆ.

ಪೋಲಿಸರು ಕೂಡಾ ಈ ಅಕ್ರಮ ಗೋಕಳ್ಳಸಾಗಾಣಿಕೆ ಹಾಗೂ ಕಸಾಯಿಖಾನೆಯ ಜೊತೆ ಸೇರಿದ್ದಾರೆ. ವರದಿಗಾರ ಅಲ್ಲಿಗೆ ಹೋಗುವ ಮೊದಲೇ ಆ ೨೦೦ ಹಸುಗಳನ್ನು ಅಲ್ಲಿಂದ ಸಾಗಿಸಲು ತಯಾರಿ ನಡೆಸಿದ್ದರು ಎಂದು ದೂರಿದ್ದಾರೆ. ಕಸಾಯಿಖಾನೆಯಲ್ಲಿ ಗೋವುಗಳ ಮೂಳೆ, ರಕ್ತಗಳು ಸಿಕ್ಕಿದ್ದವೋ ಹೊರತು ಹಸುಗಳು ಕಾಣಸಿಕ್ಕಿರಲಿಲ್ಲ. ದಾಳಿ ನಡೆಯುವ ಹಿಂದಿನ ದಿನ ಹಸುಗಳು ಅಲ್ಲಿ ಓಡಾಡುತ್ತಿದ್ದವು ಎಂದು ವರದಿಗಾರ ಹೇಳಿದ್ದಾರೆ.

ದಾಳಿ ನಡೆದ ದಿನ ಆ ಗೋವುಗಳನ್ನು ಮರ ಹಾಗೂ ಪೊದೆಗಳಲ್ಲಿ ಬಲವಂತವಾಗಿ ಬಂದಿಸಿಡಲಾಗಿತ್ತು. ಕರುಗಳನ್ನು ಬಾಯಿ ಹಾಗೂ ಕಾಲನ್ನು ಅವುಗಳು ಓಡಬಾರದು ಹಾಗೂ ಸದ್ದು ಬರಬಾರದೆಂದು ಕಟ್ಟಲಾಗಿತ್ತು. ಅಧಿಕಾರಿಗಳು ೭೦ ಹಸುಗಳನ್ನು ರಕ್ಷಿಸಿಲು ಸಾಧ್ಯವಾಯಿತು.

ಗೋವುಗಳನ್ನು ರಕ್ಷಿಸುವುದನ್ನು ಕಂಡಂತಹ ಇಸ್ಲಾಮಿಕ್ ಉಗ್ರರ ತಂಡ ಬಂದು ಅಧಿಕಾರಿಗಳು ಹಾಗೂ ಮಾಧ್ಯಮ ವರದಿಗಾರರ ಮೇಲೆ ಹಲ್ಲೆ ನಡೆಸಿದರು. ಪತ್ರಕರ್ತ ಮಾತನಾಡಲು ಪ್ರಯತ್ನಿಸಿದರೂ ಅವರ ಮೇಲೆ ಹಲ್ಲೆ ನಡೆಸುವುದನ್ನು ಬಿಡಲಿಲ್ಲ. ಪೋಲಿಸರು ಮೂಕ ಪ್ರೇಕ್ಷಕರಾಗಿ ನಿಂತಿದ್ದರು. ಇದರಲ್ಲಿ ಗೊತ್ತಾಗುತ್ತದೆ ಈ ಇಸ್ಲಾಮಿಕ್ ಉಗ್ರರನ್ನು ಹೇಗೆ ನಮ್ಮ ಹೊಸದಾಗಿ ಆಯ್ಕೆಯಾದ ಅಥವಾ ಬಲವಂತವಾಗಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿಯವರ ಸರಕಾರ ರಕ್ಷಿಸುತ್ತಿದೆ ಎಂದು.

ಕರ್ನಾಟಕ ಪೋಲಿಸರು ಸಾಮಾಜಿಕ ಜಾಲತಾಣಗಳಲ್ಲಿ ಯಾರಿಗೂ ಹಾನಿ ಮಾಡದ ಮೀಮ್ ಪೇಜ್ ಗಳ ಅಡ್ಮಿನ್ ಬಂದಿಸುವುದರ ಬದಲು ಇಂತಹ ಉಗ್ರರನ್ನು ಬಂಧಿಸುವುದು ಸೂಕ್ತವೆಂದು ನಮ್ಮ ಅನಿಸಿಕೆ.

ನಂತರ ಅವರ ಮೇಲೆ ಅಂದರೆ ೭ ಇಸ್ಲಾಮಿಕ್ ಉಗ್ರರ ಮೇಲೆ FIR ದಾಖಲು ಮಾಡಲಾಗಿದೆ. ಈ ಮಾಧ್ಯಮಗಳ ದ್ವಿಮುಖ ನೀತಿ ಬಗ್ಗೆ ಮಾತನಾಡುವುದಾದರೆ ದೇಶದ ವಿವಿಧ ಭಾಷೆಯಲ್ಲಿ ತಮ್ಮದೇ ನ್ಯೂಸ್ ಚಾನಲ್ ಇರುವಾಗ ಇದರ ಬಗ್ಗೆ ಯಾವುದೇ ಚರ್ಚೆ ಅಥವಾ ಅದನ್ನು ವಿರೋಧಿಸದೇ ಇದನ್ನು ಮುಚ್ಚಿ ಹಾಕಲು ಪ್ರಯತ್ತಿಸುತ್ತಿರುವುದು ದ್ವಿಮುಖ ನೀತಿಗೆ ಉತ್ತಮ ಉದಾಹರಣೆ.

ಉತ್ತರ ಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಅಕ್ರಮ ಕಸಾಯಿಖಾನೆಯನ್ನು ಮುಚ್ಚಿದಾಗ ಯೋಗಿ ಹೆಸರನ್ನು ಕೆಡಿಸಿ ತಿಂಗಳುಗಳ ಕಟ್ಟಲೆ ಚರ್ಚೆ ನಡೆಸಿದ ಮಾಧ್ಯಮಗಳು ಇಂದು ತಮ್ಮದೇ ವರದಿಗಾರರ ಮೇಲೆ ಹಲ್ಲೆ ನಡೆದಾಗ ಸುಮ್ಮನೆ ಕುಳಿತಿವೆ.